ಸುಳ್ಯ: ಪುತ್ತೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಾಲಕಿಯೊಂದಿಗೆ ಮಧ್ಯ ವಯಸ್ಕನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ವರದಿಯಾಗಿದೆ.
ಸೋಮವಾರಪೇಟೆಯ ಕುಟುಂಬವೊಂದು ಪುತ್ತೂರು ಬಸ್ ನಲ್ಲಿ ಮಡಿಕೇರಿಯ ಕಡೆಗೆ ಪ್ರಯಾಣಿಸುತ್ತಿದ್ದಾಗ, ಪುತ್ತೂರಿನಲ್ಲಿ ಬಸ್ ಹತ್ತಿದ ಪಾಣಾಜೆಯ ಅಬ್ದುಲ್ ಕುಞ್ ಎಂಬವರು ಬಾಲಕಿಯ ಮೈಮೇಲೆ ತಪ್ಪಾಗಿ ಕೈ ಹಾಕಿದನೆನ್ನಲಾಗಿದೆ.
ಬಾಲಕಿ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ ಬಸ್‌ನಲ್ಲಿದ್ದ ಮನೆಯವರಿಗೆ ಮಾಹಿತಿ ನೀಡಿ ಘಟನೆ ಸ್ಥಳದಲ್ಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಆತನನ್ನು ಹಿಡಿದುಕೊಂಡು ತಕ್ಷಣವೇ ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದೀಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.