ಪುತ್ತೂರು ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಧನಸಹಾಯ

  • 11 Aug 2025 05:35:39 PM


ಪುತ್ತೂರು ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಧನಸಹಾಯ.

ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಕೆಮ್ಮಾಯಿ ನೀರ್ಪಾಜೆ ನಿವಾಸಿ ಹರೀಶ್ ಗೌಡ ಇವರಿಗೆ "ಅರುಣ ಸಾರಥಿ" ಚಾಲಕರ ಸಂಘಟನೆಯ ವತಿಯಿಂದ 10,000 ರೂ. ಧನಸಹಾಯವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ "ಹಿಂದವಿ" ಕಛೇರಿಯಲ್ಲಿ ನೀಡಲಾಯಿತು.

ಈಗಾಗಲೇ ಪ್ರತೀ ತಿಂಗಳಿಗೆ 10,000 ರೂ.ನಂತೆ ಕಳೆದ 8 ತಿಂಗಳಿನಲ್ಲಿ ರೂಪಾಯಿ 80,000 ಸಾವಿರ ರೂಪಾಯಿ ಧನ ಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ವಿತರಣೆ ಮಾಡಲಾಗಿದೆ.

ಈ ಸಂಧರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾಯ್ಕ್ ಕೆಯ್ಯೂರು, ಸಚಿನ್ ವಳತ್ತಡ್ಕ,ಸ್ವಸ್ತಿಕ್ ತಾರಿಗುಡ್ಡೆ,ಪ್ರವೀಣ್ ಕೆಮ್ಮಾಯಿ,ಸುರೇಂದ್ರ ಅಡ್ಲಿಮಜಲು,ಯೋಗೀಶ್ ಕುಕ್ಕಾಡಿ, ಮೊದಲಾದವರು ಉಪಸ್ಥಿತರಿದ್ದರು.

ಅರುಣ ಸಾರಥಿಯ ಈ ಸೇವೆ ಸಮಾಜಕ್ಕೆ ಮಾದರಿಯಾಗಿದೆ