ಪುತ್ತೂರು ನಗರ ಸಭೆ ಯ ಕಸ ಸಂಗ್ರಹದ ವಾಹನಕ್ಕೆ ಯಾವುದೇ ಟ್ರಾಫಿಕ್ ನಿಯಮಗಳು ಅನ್ವಯಿಸುದಿಲ್ಲವೇ..... ಆರ್.ಟಿ.ಓ ಅಧಿಕಾರಿಗಳೇ, ಟ್ರಾಫಕ್ ಪೋಲೀಸ್ ಅಧಿಕಾರಿಗಳೇ ಇದರ ವಿರುದ್ದ ಕ್ರಮ ಯಾವಾಗ
ಆಟೋ ರಿಕ್ಷಾ ಇನ್ನಿತರ ವಾಹನದಲ್ಲಿ ಸ್ವಲ್ಪ ಲೋಡ್ ಕಂಡಾಗ ನಿಲ್ಲಿಸಿ ದಂಡ ವಿಧಿಸುವ ಪೋಲೀಸ್ ಅಧಿಕಾರಿಗಳು ಆರ್ ಟಿ ಓ ಅಧಿಕಾರಿಗಳು ಇದನ್ನು ಗಮನಿಸುವುದಿಲ್ಲವೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ನಗರ ಸಭೆ ವಾಹನ ಎಂಬ ಮಾತ್ರಕ್ಕೆ ಬೇಕಾಬಿಟ್ಟಿ ಲೋಡ್ ಹಾಕಿ ಚಲಾಯಿಸುವ ಅಧಿಕಾರ ಇದೇಯೇ ಇದನ್ನು ಸಾರ್ವಜನಿಕರು ಅಟೋ ಚಾಲಕರು ಪ್ರಶ್ನಿಸಿದ್ದಲ್ಲಿ ಅವರನ್ನು ಹೆದರಿಸಲು ನಗರ ಸಭೆಯ ವಾಹನ ಚಾಲಕರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಇನ್ನಾದರು ಪೋಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ.