ಮಂಗಳೂರು: ಅಕ್ರಮ ಗೋ ಸಾಗಾಟಗಾರರ ಹೆಡೆಮುಡಿ ಕಟ್ಟಿ ಕ್ರಮ ಕೈಗೊಳ್ಳಿ – ಶಾಸಕರಾದ ವೇದವ್ಯಾಸ್ ಕಾಮತ್ ಆಗ್ರಹ

  • 27 Mar 2025 04:05:19 PM


ಮಂಗಳೂರು: ಮಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟವು ದಿನೇ ದಿನೇ ಹೆಚ್ಚಾಗುತ್ತಿದ್ದು, ಹಿಂದೂ ಸಂಘಟನೆಗಳ ಮಾಹಿತಿ ಮೇರೆಗೆ ಪೊಲೀಸರು ಕಳೆದ ವಾರ ನಾಲ್ಕೈದು ಕಡೆ ದಾಳಿ ನಡೆಸಿ ಒಂದು ಟನ್ ಗೂ ಅಧಿಕ ಗೋಮಾಂಸವನ್ನು ಪತ್ತೆ ಹಚ್ಚಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

 

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಾಜದ ಶಾಂತಿ ಕದಡುವವರ ಹೆಡೆಮುರಿ ಕಟ್ಟಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ.

 

ಕುದ್ರೋಳಿ ಕಸಾಯಿಖಾನೆಯು ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಆದರೆ ಕದ್ದ ಗೋವುಗಳ ವಾಹನಗಳು ಅದೇ ಸ್ಥಳಕ್ಕೆ ಹೋಗುತ್ತಿರುವುದು ಅನುಮಾನ ಮೂಡಿಸುತ್ತಿದೆ. ಇದು ಯಾರ ಕುಮ್ಮಕ್ಕಿನಿಂದ ನಡೆಯುತ್ತಿದೆ?, ಪೊಲೀಸ್ ಇಲಾಖೆಯ ಮೇಲೆ ಭಯ ಇಲ್ಲದೇ ಈ ಅಕ್ರಮ ಸಾಗಾಟಗಳು ಹೇಗೆ ನಡೆಯುತ್ತಿದೆ? ಎಂಬ ಪ್ರಶ್ನೆಗಳನ್ನು ಶಾಸಕರು ಮುಂದಿಟ್ಟರು.

 

ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವ ದಂಧೆಕೋರರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ ಎಂಬ ಗಲಾಟೆಕೋರರಿಗೆ ಧೈರ್ಯವಿರಬಹುದು. ಆದರೆ, ಪೊಲೀಸರು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಅವಾಗ ಇಂತಹ ಕೃತ್ಯಗಳು ನಡೆಯ್ದು ಎಂದು ಕಾಮತ್ ಒತ್ತಿಹೇಳಿದರು. ಗೋಹತ್ಯಾ ನಿಷೇಧ ಕಾನೂನಿನಡಿ ಗರಿಷ್ಠ ಶಿಕ್ಷೆ ವಿಧಿಸಿ, ಅಕ್ರಮಕ್ಕೆ ಬಳಸಿದ ವಾಹನ ಮತ್ತು ಸ್ಥಳವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.

 

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮುನ್ಸೂಚನೆಯಿಲ್ಲದೇ ಅನಾಹುತಗಳು ಸಂಭವಿಸುತ್ತದೆ ಹೋಗಬಹುದು. ಇನ್ನು ಎಚ್ಚರ ವಹಿಸಲಿದ್ದಲ್ಲಿ ಇಂತಹ ಸ್ಥಿತಿಗೆ ರಾಜ್ಯ ಸರ್ಕಾರವೇ ನೇರ ಹೊಣೆಗಾರವಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.