ಮಂಜೇಶ್ವರ ಉಪಜಿಲ್ಲೆ ಶಾಲಾ ಕಲೋತ್ಸವದ ಲೋಗೋ ವಿಚಾರದಲ್ಲಿ ಬೀಳುತಿದೆ ಬೆಂಕಿ ??? ರಾಜಕೀಯ,ಕೋಮು ಮತ್ತು ಕ್ರೂರತೆಯನ್ನು ಪ್ರತಿಬಿಂಬಿಸುವ ಹಸಿರು ಕೆಂಪು ಬಣ್ಣ... ಜನರ ತೀವ್ರ ಆಕ್ರೋಶ ?

  • 27 Oct 2024 08:29:09 PM


ಮಂಜೇಶ್ವರ: ಮಂಜೇಶ್ವರ ಉಪಜಿಲ್ಲೆಯ ಶಾಲಾ ಕಲೋತ್ಸವದ ಲೋಗೋದಲ್ಲಿ ಪ್ಯಾಲಸ್ಟೈನ್ ಬಾವುಟದ ಬಣ್ಣಗಳನ್ನು ಬಳಸಲಾಗಿದೆ ಎಂಬ ಆರೋಪದಿಂದ ವಿವಾದ ಉಂಟಾಗಿದೆ. ಲೋಗೋದಲ್ಲಿ ಹಸಿರು, ಬಿಳಿ, ಮತ್ತು ಕೆಂಪು ಬಣ್ಣಗಳ ಬಳಕೆಯು, ಪ್ಯಾಲಸ್ಟೈನ್ ಬಾವುಟದ ಬಣ್ಣಗಳಿಗೆ ತಕ್ಕಂತೆ ಇರುವುದರಿಂದ, ಜನರಲ್ಲಿ ಇದು ಭಾರತವೋ ಅಥವಾ ಪ್ಯಾಲಸ್ಟೈನ್‌ಗೋ ಎಂಬ ಸಂದೇಹ ಮೂಡಿಸಿದೆ

 

 

ಸ್ಥಳೀಯರು “ಲೋಗೋ ಬಣ್ಣಗಳ ಕುರಿತು ಯಾವುದೇ ಚರ್ಚೆ ನಡೆದಿರಲಿಲ್ಲ” ಎಂದು ಆರೋಪಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರು, ಕೇಸರಿ ಬಣ್ಣದ ಅಳವಡಿಕೆ ಇಲ್ಲ ಎಂದು ಆಕ್ಷೇಪಿಸಿದ್ದಾರೆ.ಬಣ್ಣಗಳ ಆಯ್ಕೆಯು ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತವಾಗಿರುವಂತೆ ಕಾಣುತ್ತದೆ ಎಂಬ ಆರೋಪ ಕೂಡ ಕೇಳಿಬಂದಿದೆ.

 

“ಪ್ಯಾಲಸ್ಟೈನ್‌ಗೆ ಭಾರತಕ್ಕೆ ಏನು ಸಂಬಂಧ?” ಎಂಬ ಪ್ರಶ್ನೆಗಳು ಜನರಿಂದ ಕೇಳಿಬರುತ್ತಿದೆ.ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲೋಗೋ ಬದಲಾವಣೆಗೆ ಒತ್ತಾಯಗಳು ಹೆಚ್ಚುತ್ತಿವೆ.