ಚಾಮರಾಜನಗರ: ಕನ್ನಡ ಚಿತ್ರರಂಗದ ಪ್ರಧಾನ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಇಂದು (ಆಗಸ್ಟ್ 1) ವಿಧಿವಶರಾಗಿದ್ದಾರೆ.
ನಾಗಮ್ಮ(92) ಅವರು ಚಾಮರಾಜನಗರ ಜಿಲ್ಲೆಯ ಗಾಜನೂರಿನ ತಮ್ಮ ಸ್ವಗೃಹದಲ್ಲಿ ವಾಸವಿದ್ದವರು. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಅವರು ರಾಜ್‌ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದರು.