ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇವರು ನೀಡುವ ಆಮಿಷಕ್ಕೆ ಬಲಿಯಾಗಿ ಅನೇಕ ಹಿಂದೂ ಹೆಣ್ಣು ಮಕ್ಕಳು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಆದರೆ ಏನೂ ತಪ್ಪು ಮಾಡದ ಮುಗ್ಧ ಹೆಣ್ಮಕ್ಕಳು ಕೂಡಾ ಕೆಕವೊಮ್ಮೆ ಇಂತಹ ಪಾಪಿಗಳ ನರಕದಿಂದ ಮುಕ್ತಿ ಬಯಸಿ ಜೀವನವನ್ನು ದುರಂತ ಅಂತ್ಯಗೊಳಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಪ್ರಾಪ್ತೆ ಮುಸ್ಲಿಂ ಯುವಕನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮುಸ್ಲಿಂ ಯುವಕನ ಕಾಟಕ್ಕೆ ಬೇಸತ್ತು ಬಾಲಕಿ ಆತ್ಮಹತ್ಯೆ..!
ಮುಸ್ಲಿಂ ಯುವಕನ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೋ ಚಾಲಕ ಮೆಹಬೂಬ್ ಕಿರುಕುಳ ನೀಡುತ್ತಿದ್ದ ಯುವಕನಾಗಿದ್ದು ಪೊಲೀಸರು ಇವನನ್ನು ಬಂಧಿಸಿದ್ದಾರೆ. ಇನ್ನು ಈತನ ವಿರುದ್ಧ ಹಿಂದೂ ಸಂಘಟನೆ ರೊಚ್ಚಿಗೆದ್ದಿದೆ.
ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂದು ಘಟನೆಯನ್ನು ಆಕ್ರೋಶಭರಿತರಾಗಿ ಖಂಡಿಸಿ ಜೇವರ್ಗಿ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ, ಆರೋಪಿಯನ್ನು ಬಂಧಿಸಲು ಪ್ರತಿಭಟನಾಕಾರರು ಆಗ್ರಹ ಮಾಡಿದ್ದು, ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಹಬೂಬ್ ನ ಕಿರುಕುಳಕ್ಕೆ ಪ್ರಾಣತೆತ್ತ ಬಾಲಕಿ...! ಆರೋಪಿ ಅರೆಸ್ಟ್..!
ಜೇವರ್ಗಿ ತಾಲೂಕಿನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ ಬಾಲಕಿಗೆ ಕಳೆದ ಹಲವು ದಿನಗಳಿಂದ ಆಟೋ ಚಾಲಕ ಮೆಹಬೂಬ್ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಆತನನ್ನು ಪ್ರೀತಿಸದಿದ್ದರೆ ಸಾಯಿಸುವುದಾಗಿ ಕೂಡಾ ಬೆದರಿಕೆ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೇ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಲವು ದಿನಗಳಿಂದ ಪ್ರೀತಿ ಮಾಡುವಂತೆ ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪಿ ಮೆಹಬೂಬ್, ನನ್ನು ಪೋಲಿಸರು ಇದೀಗ ಬಂಧಿಸಿದ್ದಾರೆ. ಯುವಕನ ಕಿರುಕುಳದ ಕಾರಣಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದ್ದು ಇದೀಗ ಪೊಲೀಸರಿಂದ ತನಿಖೆ ನಡೆಯುತ್ತಿದೆ.