ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಪಾದಯಾತ್ರೆಯ ಮೂಲಕ ಬರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇದೀಗ ಒಂದು ಸಂತಸದ ಸುದ್ದಿ. ಈ ವರ್ಷ ಪಾದಯಾತ್ರೆಯ ಮೂಲಕ ಸ್ವಾಮಿಯ ದರ್ಶನಕ್ಕೆ ಬರುವ ಮಾಲಾಧಾರಿಗಳಿಗೆ ವಿಶೇಷ ದರ್ಶನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ದೇವಾಲಯಕ್ಕೆ ಬರುವ ಭಕ್ತರು ಈಗ ಸ್ಪೆಷಲ್ ಎಂಟ್ರಿ ಮೂಲಕ ಶೀಘ್ರ ದರ್ಶನವನ್ನು ಮಾಡಬಹುದು.
ಎರುಮೇಲಿ ಪುಲ್ ಕಾನನ್ ಪಾದ (Erumeli Puthenkavu Pulikunnu) ಶಬರಿಮಲೆ ಯಾತ್ರೆಯ ದಾರಿಯಲ್ಲಿರುವ ಪ್ರಮುಖ ಸ್ಥಳ. ಈ ಮೂಲಕ ಹಲವಾರು ಗುಡ್ಡ ಬೆಟ್ಟಗಳನ್ನು ಕಲ್ಲು ಮುಳ್ಳನ್ನು ಮೆಟ್ಟಿ ಸುಮಾರು 40 km ಗಳಷ್ಟು ದೂರ ಪಾದಯಾತ್ರೆಯ ಮೂಲಕ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಈ ಸ್ಪೆಷಲ್ ಎಂಟ್ರಿ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.
ಸ್ಪೆಷಲ್ ಎಂಟ್ರಿಯ ಮೂಲಕ ದರ್ಶನ ಸಮಯ ಉಳಿತಾಯವಾಗುವುದರ ಜೊತೆಗೆ ಭಕ್ತರಿಗೆ ಹೆಚ್ಚು ಆಧ್ಯಾತ್ಮಿಕ ಅನುಭವವನ್ನು ನೀಡಲು ಸಹಾಯಕವಾಗುತ್ತದೆ. ಈ ಹೊಸ ನಿಯಮದ ಜಾರಿಯು ಪಾದಯಾತ್ರೆಯ ಮೂಲಕ ದೇವರ ದರ್ಶನಕ್ಕೆ ಬರುವ ಪ್ರತಿಯೊಬ್ಬ ಅಯ್ಯಪ್ಪ ಸ್ವಾಮಿ ಭಕ್ತರಿಗೂ ಇದು ಅತೀವ ಸಂತಸವನ್ನು ನೀಡುವ ವಿಷಯವಾಗಿದೆ.