ಕಾನ್ಪುರ್: ಖಾಕಿ ತೊಟ್ಟು ಕಾನೂನಿನ ಪಾಠ ಮಾಡಬೇಕಾದ ಪೊಲೀಸ್ ಒಬ್ಬ ಹಿಂದೂ ಮಹಿಳೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಕಾನ್ಪುರ SP Mohammed Mohsin Kanpur ಎಂದು ಗುರುತಿಸಲಾಗಿದೆ.
ವಿದ್ವಾಂಸೆಯಾಗಿರುವ ಸಂತ್ರಸ್ತೆಗೆ ಮದುವೆಯಾಗುವುದಾಗಿ ಭರವಸೆ ನೀಡಿ ಮೊಹ್ಸಿನ್ ಅತ್ಯಾಚಾರ ನಡೆಸಿದ್ದು,ಸದ್ಯ ಪ್ರಕರಣ ದಾಖಲಾಗಿದೆ. ಈ ಬಗೆಗಿನ ಸ್ಟೋರಿ ಇಲ್ಲಿದೆ.
ಅತ್ಯಾಚಾರದ ಬಳಿಕ ವರ್ಗಾವಣೆ!
ಕಾನ್ಪುರದಲ್ಲಿ ಸಹಾಯಕ ಪೊಲೀಸ್ ಆಯುಕ್ತನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮೊಹ್ಸಿಮ್ ಐಐಟಿ kanpur ವಿದ್ವಾಂಸೆಯೊಂದಿಗೆ ಸ್ನೇಹ ಬೆಳೆಸಿ ಆಕೆಗೆ ಪ್ರೀತಿಯ ಬಲೆ ಬೀಸಿದ್ದಾನೆ.
ಬಳಿಕ ನಿನ್ನನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ಅತ್ಯಾಚಾರ ನಡೆಸಿದ್ದಾನೆ. ಈ ವಿಚಾರ ಬಹಿರಂಗವಾದ ಕೂಡಲೇ ಮೊಹ್ಸಿನ್ ವರ್ಗಾವಣೆಯಾಗಿದ್ದಾನೆ.
ಆದರೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚಾದ ಕಾರಣ ಸದ್ಯ, ಈ ಪ್ರಕರಣದ ತನಿಖೆಗೆ ಹೊಸ ತಂಡ ರಚಿಸಲಾಗಿದೆ.
ಪತ್ನಿಗೆ ವಿಚ್ಛೇದನ ನೀಡಿ ಪೊಲೀಸ್ ಪರಸಂಗ!
ಪೊಲೀಸ್ ಅಧಿಕಾರಿಯಾಗಿದ್ದ ಮೊಹ್ಸಿನ್‌ಗೆ ಐಐಟಿಯಲ್ಲಿ ವಿದ್ವಾಂಸೆಯಾಗಿದ್ದ ಹಿಂದು ಯುವತಿಯ ಮೇಲೆ ಕಣ್ಣು ಬಿದ್ದಿತ್ತು. ಆಕೆಯನ್ನು ಒಲಿಸಿಕೊಳ್ಳಲು ಈತ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದ.
ಬಳಿಕ ಯುವತಿಯೊಂದಿಗೆ ಸಂಬಂಧ ಬೆಳೆಸಿ, ಮದುವೆಯಾಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾಳೆ.
ಸದ್ಯ, ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಸಾಬೀತಾದರೆ ಮೊಹ್ಸಿನ್ ತಲೆದಂಡವಾಗುವುದು ನಿಶ್ಚಿತ ಎನ್ನಲಾಗಿದೆ.