ಧರ್ಮಸ್ಥಳ: ನೇತ್ರಾವತಿ ನದಿಯ ಬಳಿ ಉತ್ಖನ್ನದ ವೇಳೆ ಅಸ್ಥಿಪಂಜರದ ಅವಶೇಷ ಪತ್ತೆ! ಶೋಧ ಕಾರ್ಯಾಚರಣೆಯಲ್ಲಿ ಮುಂದಿನ ಸುಳಿವು?

  • 31 Jul 2025 05:23:01 PM



ಧರ್ಮಸ್ಥಳ: ಹಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಶೋಧ ಕಾರ್ಯಾಚರಣೆಯ 3ನೇ ದಿನವಾದ ಇಂದು ಗುರುವಾರ, ನೇತ್ರಾವತಿ ನದಿಯ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬುದಾಗಿ ತಿಳಿದು ಬಂದಿದೆ.

 

 

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತು ಹಾಕಲಾದ ಮೃತದೇಹಗಳ ಪತ್ತೆಗೆ ಎಸ್ಐಟಿ ತಂಡ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.

 

 ಈ ಹಿನ್ನೆಲೆಯಲ್ಲಿ ದೂರುದಾರರು ಗುರುತಿಸಿದ್ದ 13 ಶಂಕಿತ ಸ್ಥಳಗಳ ಪೈಕಿ ಆರನೇ ಸ್ಥಳದಲ್ಲಿ ಗುರುವಾರ ಬೆಳಿಗ್ಗೆ ಉತ್ಖನನ ನಡೆಸಲಾಗಿದ್ದು, ಅಲ್ಲಿಂದ ಮನುಷ್ಯನ ಎಲುಬಿನ ಚೂರುಗಳು ಲಭಿಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

 

, ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. 

 

ಶೋಧದ ಮೊದಲ ಎರಡು ದಿನಗಳಲ್ಲಿ ಐದು ಸ್ಥಳಗಳಲ್ಲಿ ಉತ್ಖನನ ನಡೆದಿತ್ತು, ಆದರೆ ಯಾವುದೇ ಶವದ ಅವಶೇಷಗಳು ಕೂಡ ಪತ್ತೆಯಾಗಿರಲಿಲ್ಲ. 

 

ಸ್ಥಳೀಯರ ಸಹಕಾರದೊಂದಿಗೆ ಎಸ್ಐಟಿ ತಂಡ ಮುಂದಿನ ಸ್ಥಳಗಳಲ್ಲೂ ಶೋಧ ಮುಂದುವರಿಸುವ ನಿರೀಕ್ಷೆಯಿದ್ದು, ಇಡೀ ಜಿಲ್ಲೆಯ ಗಮನ ಇದೀಗ ಈ ಪ್ರಕರಣದ ಮುಂದಿನ ಬೆಳವಣಿಗೆಯತ್ತ ಕೆಂದ್ರೀಕೃತವಾಗಿದೆ.