ಕಲ್ಲಡ್ಕ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬಂಟ್ವಾಳ ಘಟಕದ ಇದರ ವತಿಯಿಂದ ಕಲ್ಲಡ್ಕ- ವಿಟ್ಲ ಬದಿ ಸರ್ಕಾರಿ ಬಸ್ ಸೌಲಭ್ಯದ ಕೊರತೆಯ ಸಮಸ್ಯೆಯನ್ನು ಖಂಡಿಸಿ ಇಂದು (ಜುಲೈ 30, 2025) ಸಂಜೆ 3.30ಕ್ಕೆ ಕಲ್ಲಡ್ಕದ ಶ್ರೀರಾಮ ಮಂದಿರದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.
ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರಿಯಾದ ಸಾರಿಗೆ ಸೌಲಭ್ಯ ಇಲ್ಲದೆ ಹತ್ತಾರು ತೊಂದರೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರತಿಭಟನೆ ಆಯೋಜಿಸಲಾಗಿದ್ದು, ಪರಿವರ್ತನೆಗಾಗಿ - ವಿದ್ಯಾರ್ಥಿ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಹೋರಾಟದಲ್ಲಿ ಎಬಿವಿಪಿಯ ಪ್ರಮುಖರು, ವಿದ್ಯಾರ್ಥಿಗಳು ಹಾಗೂ ಹಿತಚಿಂತಕರು ಭಾಗವಹಿಸಲಿದ್ದಾರೆ.
ಸಾರ್ವಜನಿಕರ ಸಮಸ್ಯೆಗೆ ನ್ಯಾಯ ದೊರಕಿಸಿ ಕೊಡಲು ಈ ಹೋರಾಟ ಎಂದು ಸಂಘಟಕರು ತಿಳಿಸಿದ್ದಾರೆ.