ಮಡ್ಯಾರ್: ನರ್ಸಿಂಗ್ ವಿದ್ಯಾರ್ಥಿನಿಲಯದ ಶೌಚಾಲಯದಿಂದ ಹೊರ ಬರುತ್ತಿರುವ ಕಲುಷಿತ ನೀರು ರಾಜಕಾಲುವೆ ಮೂಲಕ ಮಡ್ಯಾರ್ ನಡಾರ್ ಪುಳಿತ್ತಾಡಿ ಪ್ರದೇಶಕ್ಕೆ! ಸಾರ್ವಜನಿಕರಿಂದ ತುರ್ತು ಕ್ರಮಕ್ಕೆ ಆಗ್ರಹ

  • 30 Jul 2025 01:27:46 PM


ಮಡ್ಯಾರ್: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ (ಶ್ರೀಮತಿ ಇಂದಿರಾ ಗಾಂಧಿ) ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿಲಯದ ಶೌಚಾಲಯದಿಂದ ನಿರಂತರವಾಗಿ ಹೊರಹಾಕಲ್ಪಡುತ್ತಿರುವ ಮಲಮೂತ್ರಜಲ ರಾಜಕಾಲುವೆ ಮೂಲಕ ಮಡ್ಯಾರ್ ನಡಾರ್ ಪ್ರದೇಶಕ್ಕೆ ಸಾಗುತ್ತಿದ್ದು, ತೀವ್ರ ಗಂಭೀರ ಪರಿಸ್ಥಿತಿ ಉಂಟಾಗಿರುತ್ತದೆ.

 

ಇದೇ ಕಾಲುವೆ ಪುಳಿತ್ತಾಡಿ, ಮರಿಯಾಣಪಾಲ್ ಭಾಗಗಳ ಮೂಲಕ ಹರಿಯುತ್ತಿದ್ದು, ಇದರ ಅಕ್ಕಪಕ್ಕದಲ್ಲಿ ಕುಡಿಯುವ ನೀರಿನ ಬಾವಿಗಳು ಹಾಗೂ ಮನೆಗಳು ಇರುವುದರಿಂದಾಗಿ ಸ್ಥಳೀಯರು ಇದೀಗ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.

 

ಈ ಸಮಸ್ಯೆ ಸರಿಯಾಗಿ ಗಮನಕ್ಕೆ ಬರದೆ ಮುಂದುವರೆದರೆ, ಇಡೀ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಸ್ಥಳೀಯರು ಈಗಾಗಲೇ ಈ ಬಗೆಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ, ಕೋಟೆಕಾರು ಪಟ್ಟಣ ಪಂಚಾಯತ್‌ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯ ಮೂಲವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.