ಶೇಣಿ: ನಿನ್ನೆ ಸಂಜೆ ಸಂಭವಿಸಿದ ಭಾರಿ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ, ಸ್ಥಳೀಯ ಬಿಜೆಪಿ ಮುಖಂಡ ರವಿ ಶೇಣಿಯವರ ಕಾರಿನ ಮೇಲೆ ಮರ ಬಿದ್ದು ದೊಡ್ಡ ಅಪಘಾತ ಸಂಭವಿಸಿದೆ.
ರವಿ ಶೇಣಿಯವರು ಮತ್ತು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಿಟ್ಲ ಆಸ್ಪತ್ರೆಗೆ ತೆರಳಿ ಮರಳುವ ವೇಳೆಯಲ್ಲಿ, ಕೇಪು ಬಳಿ ಬಿರುಗಾಳಿಯಲ್ಲಿ ವಿದ್ಯುತ್ ಕಂಬ ಮತ್ತು ಮರ ಮುರಿದು ಅವರ ಕಾರಿನ ಮೇಲೆ ಬಿದ್ದಿದೆ.
ಘಟನೆಯಲ್ಲಿ ಕಾರಿಗೆ ಹಾನಿಯಾದರೂ, ದೇವರ ಕೃಪೆಯಿಂದ ಕುಟುಂಬದ ಎಲ್ಲ ಸದಸ್ಯರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.