ಮಂಗಳೂರು: ಹಿಂದೂ ಸಂರಕ್ಷಣಾ ಸಮಿತಿಯ ವತಿಯಿಂದ 26ನೇ ಕಾರ್ಗಿಲ್ ವಿಜಯ್ ದಿವಸವನ್ನು ಮಂಗಳೂರು ಕದ್ರಿಯ ಯುದ್ಧ ಸ್ಮಾರಕದಲ್ಲಿ ಆಚರಿಸಲಾಯಿತು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಚರಣಕಮಲಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭ ಭಾರತೀಯ ಸೇನೆಯ ಮಾಜಿ ಹವಾಲ್ದಾರ್ ದೊಡ್ಡೆ ನಂಜಯ್ಯ ಅವರು ಕಾರ್ಗಿಲ್ ವಿಜಯದ ಮಹತ್ವವನ್ನು ವಿವರಿಸಿದರು.
ಹಿಂದೂ ಜಾಗರಣ ವೇದಿಕೆಯ ಗಣೇಶ್ ಕುಲಾಲ್ ಕೆದಿಲ, ಅರುಣ್ ಸಜಿಪ, ನವೀನ್ ಮಂಗಳದೇವಿ, ಪವನ್, ಸುವೀನ್ ಮತ್ತು ಬಿಜೆಪಿ ಪ್ರಮುಖ ನಿತಿನ್ ಭಂಡಾರಿ ಸೇರಿದಂತೆ ಹಿಂದೂ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.