ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆ–ಗಾಳಿ ಸಾಧ್ಯತೆ: ಐಎಂಡಿ, ಕೆಎಸ್‌ಎನ್‌ಡಿಎಂಸಿ ಎಚ್ಚರಿಕೆ

  • 23 Jul 2025 04:32:21 PM


ಮಂಗಳೂರು: ಕರಾವಳಿ ಭಾಗದಲ್ಲಿ ಜುಲೈ 27ರವರೆಗೆ ಗಾಳಿ ಸಹಿತ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಹಾಗೂ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಎಚ್ಚರಿಕೆ ನೀಡಿವೆ. 

 

ಅರಬಿ ಸಮುದ್ರದಲ್ಲಿ ಗಾಳಿ ಜೋರಾಗಿರುವ ಕಾರಣ, ಅಲೆಗಳ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದ್ದು, ಸಮುದ್ರದ ಬಳಿ ಹೋಗದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

 

ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಕ್ಕೆ ನದಿಯ ಅಂಚು, ನೀರಿರುವ ಪ್ರದೇಶ ಮತ್ತು ಸಮುದ್ರದಿಂದ ದೂರವಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

 

 ಮಳೆ, ಗಾಳಿ ಅಥವಾ ಸಿಡಿಲು ಇರುವ ಸಂದರ್ಭದಲ್ಲಿ ಮಕ್ಕಳು, ಕಾರ್ಮಿಕರು ಹಾಗೂ ಕೃಷಿಕರು ಹೊರಗೆ ಹೋಗಬಾರದೆಂದು ತಿಳಿಸಿದ್ದಾರೆ.

 

ಅಪಾಯಕಾರಿ ಮರಗಳು, ಹಳೆಯ ಕಟ್ಟಡಗಳು ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲಬಾರದೆಯೂ, ಭೂಕುಸಿತದ ಸಂಭವವಿರುವ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕೆಂದು ಎಚ್ಚರಿಕೆ ನೀಡಿದೆ.