ಪುತ್ತೂರು : ಜು. 21 ನಾಳೆ ಮಲಿಂಗೇಶ್ವರ ಸನ್ನಿಧಿಯಲ್ಲಿ ‘ಕೇಸರದ ಗೊಬ್ಬು’ ಆಮಂತ್ರಣ ಪತ್ರ ಬಿಡುಗಡೆ!

  • 20 Jul 2025 09:42:33 PM


ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಪುತ್ತೂರು ಇದರ ವತಿಯಿಂದ ಆಯೋಜಿಸಲಾದ ‘ಕೇಸರದ ಗೊಬ್ಬು’ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜುಲೈ 21, ಸೋಮವಾರ ಬೆಳಿಗ್ಗೆ 8.30ಕ್ಕೆ ಪುತ್ತೂರಿನ ಮಲಿಂಗೇಶ್ವರ ದೇವರ ಪವಿತ್ರ ಸನ್ನಿಧಿಯಲ್ಲಿ ನಡೆಯಲಿದೆ.

 

ಈ ಸಂದರ್ಭದಲ್ಲಿ ಟ್ರಸ್ಟ್‌ನ ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿರಲಿದ್ದಾರೆ.

 

ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯ ಸಂಕೇತವಾದ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಆಹ್ವಾನಿಸಲಾಗಿದೆ.