ಮಂಗಳೂರು: ಪಾಂಡೇಶ್ವರದಲ್ಲಿ ಸತತ ಮಳೆಯಿಂದ ಮನೆಗೆ ಹಾನಿ: ಶಾಸಕರ ವೇದವಯ ಭೇಟಿ ನೀಡಿ ಪರಿಶೀಲಿಸಿ ತಕ್ಷಣದ ಪರಿಹಾರಕ್ಕೆ ಸೂಚನೆ

  • 20 Jul 2025 04:33:11 PM


ಮಂಗಳೂರು: ನಗರದಲ್ಲಿ ಎಲ್ಲೆಡೆ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಪಾಂಡೇಶ್ವರದ ಪೋರ್ಟ್ ವಾರ್ಡ್ ಸಂಖ್ಯೆ 45 ರಲ್ಲಿ ಮನೆಗೆ ತೀವ್ರ ಹಾನಿಯಾಗಿದೆ. 

 

ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಸತತ ಮಳೆಯಿಂದ ಸೇಸಪ್ಪ ಅವರ ಮನೆಗೆ ಬಹುಮಟ್ಟಿಗೆ ಹಾನಿಯುಂಟಾಗಿದೆ. ಗೋಡೆಗಳು ಸಂಪೂರ್ಣವಾಗಿ ಜರಿದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ದೊರಕಿದೆ.

 

ಕೂಡಲೇ ಈ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಯಾವುದೇ ವಿಳಂಬವಾಗದಂತೆ ಕ್ರಮಕೈಗೊಳ್ಳ ಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

 

ಈ ಸಂದರ್ಭ ಬಿಜೆಪಿ ಪ್ರಮುಖರು ನಾರಾಯಣ ಗಟ್ಟಿ, ಅನಿಲ್ ಕುಮಾರ್, ಸುರೇಶ್ ಕುಮಾರ್ ಎಂ., ವಸಂತ ಕುಮಾರ್ ಮತ್ತು ಪಾಲಿಕೆಯ ವಿವಿಧ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.