ಯೆಮೆನ್ : ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ: ವಿಚಾರಣೆ ಆಗಸ್ಟ್ 14ಕ್ಕೆ ಮುಂದೂಡಿಕೆ

  • 18 Jul 2025 02:56:53 PM


ಯೆಮನ್‌: ಯೆಮೆನ್ನಲ್ಲಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿರುತ್ತದೆ. 

 

ಭಾರತ ಸರ್ಕಾರದಿಂದ ಹೆಚ್ಚಿನ ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಸಮಯ ನೀಡುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜುಲೈ 16ರಂದು ನಿಗದಿಯಾಗಿದ್ದ ಮರಣದಂಡನೆಯನ್ನೂ ಭಾರತೀಯ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

 

ಪಾಲಕ್ಕಾಡ್ ಜಿಲ್ಲೆಗೆಯ 38 ವರ್ಷದ ನಿಮಿಷಾ ಪ್ರಿಯಾ, ಎಂಬ ನರ್ಸ್ 2017ರಲ್ಲಿ ಯೆಮನ್ ಪೌರ ತಲಾಲ್ ಅಬ್ದೋ ಮೆಹದಿಯನ್ನು ಕೊಲೆ ಮಾಡಿದ ಆರೋಪದಲ್ಲಿ 2020ರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು.

 

 ಬ್ಲಡ್ ಮನಿ ನೀಡಿ ಆಕೆಯನ್ನು ಬಿಡಿಸುವ ನಿಟ್ಟಿನಲ್ಲಿ ಕುಟುಂಬ ಎಷ್ಟೇ  ಪ್ರಯತಣಿಸಿದರೂ ಕೂಡ  ಮೃತರ ಕುಟುಂಬ ಸಹಕರಿಸಲಿಲ್ಲ. ಪ್ರಸ್ತುತ ಅವರು ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ಸನಾ ನಗರದಲ್ಲಿನ ಜೈಲಿನಲ್ಲಿ ಬಂಧಿತೆಯಾಗಿದ್ದಾರೆ.