ಕಾಸರಗೋಡು: ಭಾರೀ ಮಳೆ ಮತ್ತು ಪ್ರವಾಹ ಮುನ್ಸೂಚನೆಯ ಹಿನ್ನೆಲೆಯಲ್ಲಿ ನಾಳೆ ಜುಲೈ 17 ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಣೆ!

  • 16 Jul 2025 08:17:42 PM


ಕಾಸರಗೋಡು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹದ ಮುನ್ಸೂಚನೆಯ ಹಿನ್ನೆಲೆಯಲ್ಲಿ, ನಾಳೆ ಜುಲೈ 17 (ಗುರುವಾರ) ರಂದು ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ಅವರು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಶಾಲಾ-ಕಾಲೇಜು, ವೃತ್ತಿಪರ ಕಾಲೇಜು, ಕೇಂದ್ರ ವಿದ್ಯಾಲಯ, ಟ್ಯೂಷನ್ ಕೇಂದ್ರಗಳು, ಮದ್ರಸ, ಅಂಗನವಾಡಿಗಳಿಗೆ ಈ ರಜೆ ಅನ್ವಯವಾಗಲಿದೆ.

 

ಆದರೆ, ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ನಡೆಯಲಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಶಾಲೆಗೆ ಹಾಜರಾಗಬೇಕು ಎಂಬುದಾಗಿ ಸೂಚಿಸಿದ್ದಾರೆ. 

ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಪ್ರವಾಹದ ಅಪಾಯವಿರುವ ಪ್ರದೇಶಗಳಲ್ಲಿ ತುರ್ತುವೇಳೆಯಲ್ಲಲ್ಲದೆ ಸಂಚರಿಸಬಾರದು ಎಂದು ಸೂಚನೆ ನೀಡಿದೆ.