ಮಂಗಳೂರು: ಜೋಡುಕಲ್ ನಾವುದಯನಗರ ನಿವಾಸಿ ಶ್ರೀಮತಿ ಸುಲೋಚನಾ ಅವರು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲೆಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಈಗ ಲಿವರ್‌ನಲ್ಲಿಯೂ ಶಸ್ತ್ರಚಿಕಿತ್ಸೆ ಅವಶ್ಯಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ .
ಇವರು ಈಗಾಗಲೇ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದಾಗಿ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಿದೆ.
ಆಸ್ಪತ್ರೆಯ ವೆಚ್ಚ ಅಂದಾಜು 12 ಲಕ್ಷ ರೂಪಾಯಿ ಆಗಬಹುದೆಂದು ತಿಳಿದುಬಂದಿದ್ದು, ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.
ಈ ಹಿನ್ನಲೆಯಲ್ಲಿ, ಸಹೃದಯ ದಾನಿಗಳಿಂದ ಧನ ಸಹಾಯದ ಅಪೇಕ್ಷೆಯಿದೆ.
ಖಾತೆದಾರರು: Smt. Sulochana
ಖಾತೆ ಸಂಖ್ಯೆ: 110076141487 IFSC ಕೋಡ್: CNRB0014228 ಬ್ಯಾಂಕ್: ಕ್ಯಾನರಾ ಬ್ಯಾಂಕ್