ಅಹಮದಾಬ್ : ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ ಅಪಘಾತದ ಕುರಿತಾಗಿ ತನಿಖಾ ಬ್ಯೂರೋ ಪ್ರಾಥಮಿಕ ವರದಿ ಬಹಿರಂಗಗೊಂಡಿದ್ದು, ದುರಂತಕ್ಕೆ ಕಾರಣವಾದ ಪ್ರಮುಖ ಅಂಶಗಳು ಹೊರಬಿದ್ದಿವೆ.
ಜೂನ್ 12 ರಂದು ಸಂಭವಿಸಿದ ಈ ಅಪಘಾತದಲ್ಲಿ 260 ಜನರು ಪ್ರಾಣಕಳೆದುಕೊಂಡರು. ವರದಿಯ ಪ್ರಕಾರ, ಟೇಕ್ ಆಫ್ ಆದ 3 ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ‘ರನ್’ ನಿಂದ ‘ಕಟ್‌ಆಫ್’ ಗೆ ಬದಲಾಗಿದ್ದು, ಥ್ರಸ್ಟ್ ಕಡಿಮೆಯಾಗಿತ್ತು ಎಂಬುದಾಗಿ
ಪೈಲಟ್‌ಗಳ ಕಾಕ್‌ಪಿಟ್ ಧ್ವನಿ ರೆಕಾರ್ಡ್‌ನ ಪ್ರಕಾರ ತಿಳಿದು ಬಂತು.
ಏಕೆ ಎಂಜಿನ್ ಕಟ್‌ಆಫ್ ಮಾಡಿದ್ರಿ ಎಂದು ಕೇಳಿದಾಗ ನಾನು ಮಾಡಿಲ್ಲ ಎಂಬ ಸಂಭಾಷಣೆ ಅದರಲ್ಲಿ ಕೇಳಿಬಂದಿದ್ದು, ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕ ತೊಂದರೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಇಂಜಿನ್‌ಗಳು ಆಫ್ ಆಗಿದ್ದಾಗಲೂ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿದ್ದು, ಎಂಜಿನ್ ಆಫ್ ಆದ ಕಾರಣದಿಂದ ಮೇಲೆ ಏರಲಾಗದೆ ವಿಮಾನ ಆಕಸ್ಮಿಕವಾಗಿ ಬಿದ್ದಿತು.
ಫ್ಲೈಟ್ ಡೇಟಾ ರೆಕಾರ್ಡರ್ ಪ್ರಕಾರ, ಪೈಲಟ್‌ಗಳು ಇಂಜಿನ್-1 ಅನ್ನು ಮರುಪ್ರಾರಂಭಿಸಲು ಯಶಸ್ವಿಯಾದರೂ, ಇಂಜಿನ್-2 ಚಾಲನೆಗೆ ಆಗಲಿಲ್ಲ. ತುರ್ತು ವಿದ್ಯುತ್ ಅವಶ್ಯಕತೆಗಾಗಿ ರಾಮ್ ಏರ್ ಟರ್ಬೈನ್ (RAT) ಸಕ್ರಿಯಗೊಂಡಿದ್ದು, ಇಂಜಿನ್ ವೈಫಲ್ಯವೇ ದುರಂತದ ಮೂಲ ಕಾರಣವಾಗಿದೆ ಎಂಬುದು ವರದಿಯಿಂದ ಸ್ಪಷ್ಟವಾಗಿದೆ.