ಪುತ್ತೂರು: ಗುರುಪೂರ್ಣಿಮೆಯ ದಿನವಾದ ಇಂದು ಇದರ ನಿಮಿತ್ತವಾಗಿ ಪುತ್ತೂರು ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಉಪ್ಪಿನಂಗಡಿ ಹಾಗೂ ತಮ್ಮ ಶಾಲೆಯ ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ಗುರುಪೂಜೆಗಾಗಿ ಮಾದರಿಯಾದ ಕೆಲಸವನ್ನು ಮಾಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಅವರು ಪುತ್ತೂರಿನ ನೆಕ್ಕಿಲಾಡಿಯ ಬಲ್ಲಿ ಆಯುರ್‌ಗ್ರಾಮ ಆಯುರ್ವೇದ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿ. ಸಂಸ್ಥೆಯ ಸ್ಥಾಪಕ ಶ್ರೀ ಸುಪ್ರೀತ್ ಲೋಬೋ ಅವರ ಸೇವಾ ಚಿಂತನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಪರಮಪೂಜ್ಯ ಹಿರಿಯ ವೈದ್ಯ, 91 ವರ್ಷದ ಡಾ. ಕೆ.ಜಿ. ಭಟ್ ಅವರನ್ನು ಅವರು ಗೌರವಿಸಿ, ಅವರ ಆರೋಗ್ಯ ವಿಚಾರಿಸಿದರು.
ಹಲವಾರು ವರ್ಷಗಳಿಂದ ಗ್ರಾಮೀಣ ಜನತೆಗೆ ಸೇವೆ ಸಲ್ಲಿಸುತ್ತಿರುವ ಭಟ್‌ರ ಜೀವನಮೂಲ್ಯಗಳು ಸಮಾಜಕ್ಕೆ ಪ್ರೇರಣೆಯಾಗ ಬೇಕು ಎಂದು ಹೇಳಿದರು.
ನಂತರ ತಮ್ಮ ಬಾಲ್ಯದ ಶಿಕ್ಷಕರಾದ ಶ್ರೀ ಶ್ರೀನಿವಾಸ್ ಬಿ.ಎಸ್. ಮತ್ತು ಅವರ ಧರ್ಮಪತ್ನಿ, ಗಣಿತ ಶಿಕ್ಷಕಿ ಶ್ರೀಮತಿ ಜಯಶ್ರೀ ಅವರನ್ನು ಶಾಸಕರು ಭೇಟಿಯಾಗಿ ಗುರುಪೂರ್ಣಿಮೆಯ ಶುಭದಿನದಲ್ಲಿ ವಿಶೇಷ ಗೌರವ ಸಲ್ಲಿಸಿದರು. ಹಾಗೆಯೇ ಮಾತನಾಡಿದ ಅವರು ವಿದ್ಯೆಯ ಜೊತೆಗೆ ಶಿಸ್ತಿನ ಪ್ರೇರಣೆಯೂ ಅವರು ನೀಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಮಂಡಲದ ಅಧ್ಯಕ್ಷ ದಯಾನಂದ ಉಜಿರುಮಾರು, ನಗರಾಧ್ಯಕ್ಷ ಶಿವಕುಮಾರ್ ಟಿ.ಬಿ, ಉಪಾಧ್ಯಕ್ಷರು ಸುನೀಲ್ ದಡ್ಡು, ಶಶಿಧರ್ ನಾಯ್ಕ್, ನಾಗೇಂದ್ರ ಬಾಳಿಗ, ಪ್ರತೀಕ್ ಶೆಟ್ಟಿ, ಸೃಜನ್ ಶೆಟ್ಟಿ, ಮಣಿಕಂಠ, ದಯಾನಂದ ಮೊದಲಾದವರು ಉಪಸ್ಥಿತರಿದ್ದರು.
ಗುರುಪೂರ್ಣಿಮೆಯ ದಿನದಂದು ನಡೆದ ಈ ಗೌರವ ಸಮರ್ಪಣಾ ಕಾರ್ಯಕ್ರಮವು ಶಿಕ್ಷಕರಿಗೆ ಹಾಗೂ ಹಿರಿಯರುಗಳಿಗೆ ಕೃತಜ್ಞತೆ ಸಲ್ಲಿಸುವ ಮಾದರಿಯಾಗಿದೆ ಎಂದು ಪಾಲುಗಾರರು ಅಭಿಪ್ರಾಯಪಟ್ಟರು.