ಕಾಸರಗೋಡು: ಕಾಸರಗೋಡಿನ ಪ್ರಸಿದ್ಧವಾದ 70ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗಣೇಶ ವಿಗ್ರಹದ ರಚನಾ ಮುಹೂರ್ತ ಭಕ್ತಿಪೂರ್ವಕವಾಗಿ ನೆರವೇರಿತು.
ಈ ಪವಿತ್ರ ಕಾರ್ಯಕ್ರಮವು ಬ್ರಹ್ಮಶ್ರೀ ಕೇಶವ ಆಚಾರ್ಯ ಉಳಿಯತಡ್ಕ ಅವರ ಪ್ರಧಾನ ಕಾರ್ಮಿಕತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಪ್ರಕಾರ ಮೂರ್ತಿ ರಚನೆ ಪ್ರಾರಂಭವಾತೂತು.
ಈ ಸಂದರ್ಭ ಗಣೇಶೋತ್ಸವ ಸಮಿತಿಯ ಪ್ರಮುಖರಾದಂತಹ ಸಿ.ವಿ. ಪದುವಾಳ್, ನ್ಯಾಯವಾದಿ ಮುರಳಿಧರ, ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ, ರಮೇಶ್ ಪಿ, ಕೆ.ಎನ್. ಕಮಲಾಕ್ಷ, ಮೋಹನ್ ರಾಜ್, ರವಿ ಕೇಸರಿ, ಅಶೋಕ್, ಉಮೇಶ್ ನೆಲ್ಲಿಕುಂಜೆ, ಶಂಕರ ಜೆ.ಪಿ.ನಗರ, ಟಿ.ಡಿ. ಮುರಳಿ ಕುಮಾರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.