ಮಂಗಳೂರು: ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಮೂವರ ಬಂಧನ

  • 09 Jul 2025 05:19:08 PM


ಮಂಗಳೂರು: ಮಂಗಳೂರು ನಗರ ಪೊಲೀಸರು ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಿದ್ದಾರೆ. 

 

ಬಂಧಿತರು ಮಧ್ಯಪ್ರದೇಶದ ಮಾಯಾರಾಮ್ (32), ಮಹಾರಾಷ್ಟ್ರದ ಪ್ರೇಮಸಿಂಗ್ ಪವಾರ್ (48) ಮತ್ತು ಅನಿಲ್ ಕೋಲಿ (35) ಎಂದು ಗುರುತಿಸಲಾಗಿದೆ.

 

ಪೊಲೀಸರು ಈ ಪ್ರಕರಣದಲ್ಲಿ ಈಗಾಗಲೇ 6 ಆರೋಪಿಗಳನ್ನು ಬಂಧಿಸಿರುತ್ತಾರೆ. ತನಿಖೆ ಮುಂದುವರಿದ ಬಳಿಕ ವಿಶೇಷ ತಂಡವನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ಕಳುಹಿಸಿ ಇದೀಗ ಮೂವರನ್ನು ಜುಲೈ 9ರಂದು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಬಂಧಿತರಿಂದ ಮೂರು ಮೊಬೈಲ್ ಫೋನ್ ಮತ್ತು ₹1,78,920 ನಗದು ವಶಪಡಿಸಿಕೊಳ್ಳಲಾಗಿದೆ.

 

ಪ್ರಕರಣವು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ಜುಲೈ 2ರಂದು ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ. ಇನ್ನುಳಿದ ಆರೋಪಿಗಳ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.