ವಿಟ್ಲ: ನಿನ್ನೆ ಸಂಜೆ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯು ಇದೀಗ ಹೊಸ ತಿರುವು ಪಡೆದುಕೊಂಡು
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಬಂಧನದವರೆಗೆ ತಲುಪಿದೆ.
ಹಿಂದೂ ಯುವತಿಗೆ ನಂಬರ್ ನೀಡಲು ಯತ್ನಿಸಿದ ಅಪ್ರಾಪ್ತ ಅನ್ಯಮತೀಯ ಯುವಕನನ್ನು ಹಿಂಜಾವೇ ಕಾರ್ಯಕರ್ತರ ಮಾಹಿತಿ ಮೇರೆಗೆ ನಿನ್ನೆ ವಿಟ್ಲ ಪೊಲೀಸರು ಯುವಕನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಳಿಕ ಆತ ನೀಡಿದ ದೂರಿನ ಮೇರೆಗೆ ಪದ್ಮರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಯುವಕನ ದೂರಿನ ಪ್ರಕಾರ ನಿನ್ನೆ ಸಂಜೆ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ, ಶಾಲಾ ಸಹಪಾಠಿಯೊಂದಿಗೇ ಮಾತನಾಡುತ್ತಿದ್ದ ವೇಳೆ ತಕರಾರು ಎಬ್ಬಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪದ ಮೇರೆಗೆ ಅಡ್ಯನಡ್ಕದ ಪದ್ಮರಾಜ್ ಎಂಬ ಹಿಂಜಾವೇ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿರುತ್ತಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್‌ಗಳು 0 126(2)(3), 352, 351(3), ಮತ್ತು 196(1)(a) ಅಡಿಯಲ್ಲಿ ಕೇಸು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸಿದ ಕೂಡಲೇ ಅವರನ್ನು ರಿಲೀಸ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.