ಪಟ್ನಾ: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದು ಯುವತಿ, ಈಗ ತನ್ನನ್ನು ಧರ್ಮ ಬದಲಾಯಿಸಲು ಹಾಗೂ ಗೋಮಾಂಸ ತಿನ್ನಲು ಒತ್ತಡ ಹೇರಲಾಗುತ್ತಿದೆ ಎಂದು ಗೋಗೆರಡಿದ್ದಾಳೆ. ಈ ಘಟನೆyu ಬಿಹಾರದ ಬೆಗುಸರಾಯ್‌ನಲ್ಲಿ ನಡೆದಿದೆ.
ಯುವತಿಯು ಮಧ್ಯಪ್ರದೇಶದ ಇಂದೋರ್‌ನ ಆರತಿ ಎಂಬವರಾಗಿದ್ದು, ಆಕೆ ಐದು ವರ್ಷಗಳ ಹಿಂದೆ ಮೊಹಮ್ಮದ್ ಶಹಬಾಜ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಆತನ ನಡವಳಿಕೆ ಬದಲಾಗಿದ್ದು ಆತ ಗೋಮಾಂಸ ತಿನ್ನಲು ಬಲವಂತ ಮಾಡುತ್ತಿದ್ದಾನೆ ಅದಲ್ಲದೆ ಮೊಬೈಲಿನಿಂದ ಹಿಂದು ದೇವರ ಚಿತ್ರಗಳನ್ನು ಅಳಿಸಿದ್ದಾನೆ ಮತ್ತು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ ಎಂದು ಆರತಿ ಪೊಲೀಸರಿಗೆ ತಿಳಿಸಿದ್ದಾರೆ.
ಅವನು ತನ್ನನ್ನು ತಾನು ಚಿನ್ನ-ಬೆಳ್ಳಿ ವ್ಯಾಪಾರಿಯೆಂದು ಪರಿಚಯಿಸಿಕೊಂಡಿದ್ದ ವಾಸ್ತವದಲ್ಲಿ ಮಾಲೆ ನೇಯುವ ಕೆಲಸ ಮಾಡುತ್ತಿದ್ದ.
ಈಗ ಆತನಿಂದ ಅಪಾಯವಿದೆ ಎಂಬ ಆತಂಕದಲ್ಲಿ, ಆತನ ವಿರುದ್ಧ ದೂರು ಕೊಡುವ ಬದಲಿಗೆ ತನ್ನನ್ನು ಸುರಕ್ಷಿತವಾಗಿ ಇಂದೋರ್‌ಗೆ ತಲುಪಿಸಿ ಕೊಡಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ.
ಶಹಬಾಜ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಆಕೆ ಮಕ್ಕಳಾಗದಂತೆ ಆಪರೇಶನ್ ಮಾಡಿಕೊಂಡಿದ್ದಾಳೆಂದೂ ಮುಂದೆಯೂ ಮಕ್ಕಳು ಆಗಲ್ಲ ಅದಲ್ಲದೆ ಆಕೆ ಬೇರೆ ಪುರುಷರ ಜೊತೆಗೂ ಸಂಬಂಧ ಇತ್ತು ಕೊಂಡಿದ್ದಾಳೆ ನನ್ನ ಜೊತೆಗಿದ್ದ ಐದು ವರ್ಷದಲ್ಲಿ ಮೂರು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾನೆ.
ಎಸ್ಪಿ ಸುಬೋಧ ಕುಮಾರ್, ಆಕೆ ದೂರು ಕೊಡಲು ಮುಂದೆ ಬರುತ್ತಿಲ್ಲ. ತನ್ನನ್ನು ಮರಳಿ ಇಂದೋರ್ ತಲುಪಿಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾಳೆ. ಆದ್ದರಿಂದ ಸದ್ಯಕ್ಕೆ ನಿಗಾ ಕೇಂದ್ರದಲ್ಲಿ ಇರಿಸಿಕೊಂಡು , ಇಂದೋರ್ ತಲುಪಿಸಲು ಏರ್ಪಾಡು ಮಾಡುತ್ತೇವೆ ಎಂದು ಹೇಳಿದ್ದಾರೆ.