ಹಾಸನ – ಮಂಗಳೂರು ಡಬ್ಲಿಂಗ್ ಯೋಜನೆಗೆ ಚಾಲನೆ: ಅಂತಿಮ ಲೊಕೇಷನ್ ಸರ್ವೆ ಪ್ರಗತಿಯಲ್ಲಿ!

  • 08 Jul 2025 03:05:04 PM


ಹಾಸನ/ಮಂಗಳೂರು: ಹಾಸನದಿಂದ ಮಂಗಳೂರುವರೆಗೆ (247 ಕಿಮೀ) ರೈಲು ಡಬ್ಲಿಂಗ್ ಕಾಮಗಾರಿಗೆ ಅಂತಿಮ ಲೊಕೇಷನ್ ಸರ್ವೆ (FLS) ಕೆಲಸಕ್ಕೆ ರೈಲ್ವೆ ಮಂಡಳಿ 2024 ಅಕ್ಟೋಬರ್ 24ರಂದು ರೂ.12.81 ಕೋಟಿ ಹಣ ಮಂಜೂರಿಸಿದೆ. ಇದರ ಅಂದಾಜು ಮೊತ್ತವನ್ನು ರೂ.14.02 ಕೋಟಿಗೆ 2025 ಜನವರಿ 30ರಂದು ಪರಿಶೀಲನೆಗೆ ಒಳಪಡಿಸಿ Railway Board ಗೆ ಕಳುಹಿಸಲಾಗಿದೆ.

 

ನಂತರ ಟೆಂಡರ್ ದರ ಆಧಾರದ ಮೇಲೆ ಅಂದಾಜು ಮೊತ್ತವನ್ನು ರೂ.10.37 ಕೋಟಿಗೆ ತಿದ್ದುಪಡಿ ಮಾಡಲಾಗಿದೆ.

 

 ಹಾಸನ–ಮಂಗಳೂರು DL ಮತ್ತು castleRock –kulen DL ರೈಲು ಮಾರ್ಗಗಳಿಗೆ ಸಂಬಂಧಿಸಿದ ಸರ್ವೆ ಕೆಲಸಕ್ಕೆ ರೂ.15.35 ಕೋಟಿಗೆ 2025 ಏಪ್ರಿಲ್ 18ರಂದು ಟೆಂಡರ್ ನೀಡಲಾಗಿದೆ. ಈಗಾಗಲೇ MYS ವಿಭಾಗದಿಂದ ಡೇಟಾ ಸಂಗ್ರಹಿಸಲಾಗಿದ್ದು, ಪ್ರಾಥಮಿಕ ಡೆಸ್ಕ್‌ಟಾಪ್ ಸರ್ವೆ ನಡೆಯುತ್ತಿದೆ.

 

ಯೋಜನೆಯ ವ್ಯಾಪ್ತಿಯಲ್ಲಿ ಅಂತಿಮ ಲೊಕೇಷನ್ ಸರ್ವೆ, ಸವಿಸ್ತಾರ ಯೋಜನಾ ವರದಿ (DPR), ಪರಿಸರ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನಗಳ ಸಿದ್ಧತೆ ಸೇರಿದೆ.

 

 ಪ್ಲೈನ್ ಸೆಕ್ಷನ್ (120 ಕಿಮೀ) ಹಾಸನ–ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ–ಮಂಗಳೂರು ಜಂಕ್ಷನ್ 

 

ಘಾಟ್ ಸೆಕ್ಷನ್ (127 ಕಿಮೀ) ಸಕಲೇಶಪುರ–ಸುಬ್ರಹ್ಮಣ್ಯ 

 

 

ಇಲ್ಲಿ ಈಗಿನ ಶ್ರೇಣಿಯು 1 in 50 ಆಗಿದ್ದು, ಅದನ್ನು 1 in 100 ಗೆ ಬದಲಾಯಿಸುವಂತೆ ಪ್ರಸ್ತಾವಿಸಲಾಗಿದೆ. 

 

ಗರಿಷ್ಠ ವೇಗವನ್ನು 30/ kmph 100 kmph ಹೆಚ್ಚಿಸುವ ಉದ್ದೇಶವಿದೆ.

 

ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳೊಂದಿಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲಾಗುತ್ತದೆ.

 

DPR ಸಲ್ಲಿಕೆ ಗುರಿ ದಿನಾಂಕ: ಏಪ್ರಿಲ್ 2026 ಆಗಿರುತ್ತದೆ.