ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತೂರಿನಲ್ಲಿ 11 ವರ್ಷದ ಅಂಗವಿಕಲ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಶನಿವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಕುಂಜತ್ತೂರಿನ ಕುಚಿಕಡ ಎಂಬಲ್ಲಿ ನಡೆದಿದ್ದು, ಪ್ರಮುಖ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಕರಣದ ಆರೋಪಿ ಶೇಖ್ ಅಪ್ಪ (ವಯಸ್ಸು 57), ಸ್ಥಳೀಯ ಮುಸ್ಲಿಂ ಲೀಗ್‌ನ ನಾಯಕನಾಗಿದ್ದು, ತನ್ನ ಅಂಗಡಿಗೆ ಬಾಲಕಿ ಬಂದ ಸಂದರ್ಭಡಲ್ಲಿ ಆರೋಪಿ ದೌರ್ಜನ್ಯಕ್ಕೆ ಯತ್ನಿಸಿದ ಎಂದು ವರದಿಯಾಗಿದೆ.
ಕೂಡಲೇ ಬಾಲಕಿ ಮನೆಯವರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಳೆಂದು ರಾತ್ರಿ ಅದ ಹಾಗೆ ಬಾಲಕಿಗೆ ಜ್ವರ ಬಂದುದರಿಂದ ಅವರು ತಕ್ಷಣದಂತೆ ವೈದ್ಯಕೀಯ ಪರೀಕ್ಷೆಗೆ ತೆಗೆದುಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆಯ ಬಳಿಕ ನಿನ್ನೆ ಸಂಜೆ ಆರೋಪಿಯನ್ನು ಮಂಜೇಶ್ವರದ ಕುಚಿಕಡೆಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ
ಪ್ರಸ್ತುತ ಆರೋಪಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಇದ್ದು, ಕೇಸ್ ದಾಖಲಿಸಿ ಕೋರ್ಟ್ ಅಲ್ಲಿ ಹಾಜರುಪಡಿಸುವ ಸಿದ್ಧತೆ ನಡೆದಿದೆ.
ಘಟನೆಗೆ ಸ್ಥಳೀಯರು ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.