ಮುಂಡಿತ್ತಡ್ಕ: ಧಾರಾಕಾರ ಮಳೆಯಿಂದಾಗಿ ಮುಂಡಿತ್ತಡ್ಕ ಸಮೀಪದ ಮುಗು ಸೇವಾ ಸಹಕಾರಿ ಬ್ಯಾಂಕ್‌ನ ಕೇಂದ್ರ ಕಚೇರಿಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಈ ಘಟನೆಯಿಂದಾಗಿ ಇದೀಗ ಬ್ಯಾಂಕ್ ಕಚೇರಿಯ ಕಟ್ಟಡವೇ ಭೀತಿಯಲ್ಲಿದ್ದು, ಅಧಿಕಾರಿಗಳು ಆತಂಕದಲ್ಲಿದ್ದಾರೆ.
ಇಲ್ಲಿನ ಲೋಕೋಪಯೋಗಿ ಇಲಾಖೆ ಈ ಪ್ರದೇಶದಲ್ಲಿ ರಸ್ತೆ ರಿಪೇರಿ ನಡೆಸಿದ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದಿರುವುದರಿಂದ ಗೋಡೆ ಕುಸಿತಕ್ಕೆ ಕಾರಣವಾಗಿದೆ ಎಂದೆನ್ನಲಾಗಿದೆ.
ಈ ಘಟನೆಯಿಂದಾಗಿ ಕಂಪೌಂಡಿನ ಕಲ್ಲು, ಮಣ್ಣುಗಳು ರಸ್ತೆಗೆ ಕುಸಿದು ಬಿದ್ದು ಇದೀಗ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬೃಹತ್ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ.