ಮಣಿಪುರ: ಇಂಫಲ್ ವ್ಯಾಲಿ ಪ್ರದೇಶದ ಐದು ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಶೇಕರಣೆ ಪತ್ತೆ – ಭದ್ರತಾ ಪಡೆಗಳಿಂದ ಭರ್ಜರಿ ದಾಳಿ

  • 16 Jun 2025 04:57:20 PM


ಮಣಿಪುರ: ಮಣಿಪುರದ ಇಂಫಲ್ ವ್ಯಾಲಿ ಪ್ರದೇಶದ ಐದು ಪ್ರಮುಖ ಜಿಲ್ಲೆಗಳಲ್ಲಿ ಜೂನ್ 13,14 ರಂದು ಪೊಲೀಸರು ಹಾಗೂ ಭದ್ರತಾ ಪಡೆಗಳು ಸಂಯುಕ್ತ ಶೋಧ ಕಾರ್ಯಾಚರಣೆ ನಡೆಸಿ 328 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. 

 

 

 ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ವಶಪಡಿಕೆಯಾಗಿದೆ ದಾಳಿ ಇದು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.

 

ಈ ಕಾರ್ಯಾಚರಣೆಯಲ್ಲಿ ಸೆಮಿ ಆಟೋಮ್ಯಾಟಿಕ್ ರೈಫಲ್, ಕಾರ್ಬೈನ್, ಎಕೆ-47, ಪಿಸ್ತೂಲ್, ಗ್ರೆನೇಡ್‌ಗಳು, ಮ್ಯಾಗಜಿನ್ ಹಾಗೂ ಸುಮಾರು 9300ಕ್ಕೂ ಹೆಚ್ಚು ಗುಂಡುಗಳನ್ನು ಪತ್ತೆ ಹಚ್ಚಲಾಗಿದೆ.

 

ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಮತ್ತು ಸಂಗ್ರಹಣೆಯ ವಿರುದ್ಧ ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ ಎಂಬುದು ಸ್ಪಷ್ಟವಾಗಿದೆ.

 

 “ಶಸ್ತ್ರಾಸ್ತ್ರಗಳ ವಶಪಡಿಕೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಹಾಯಕರಾಗಿದೆ. ಇಂತಹ ಶೋಧ ಕಾರ್ಯಾಚರಣೆಗಳು ಮುಂದೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಸಜ್ಜಾಗಿವೆ” ಎಂದು ADGP ಲ್ಹಾರಿ ಡೋರ್ಜೀ ಲ್ಹಟೂ ಅವರು ತಿಳಿಸಿದ್ದಾರೆ 

 

ಮೇ 2023ರಿಂದ ಮನಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಶಸ್ತ್ರಾಸ್ತ್ರ ಪತ್ತೆ ಅಕ್ರಮ ಶಕ್ತಿಗಳಿಗೆ ತೀವ್ರ ಎಚ್ಚರಿಕೆಯಾಗಿದ್ದು, ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಸರ್ಕಾರ ಮತ್ತು ಭದ್ರತಾ ಇಲಾಖೆ ನಿರಂತರ ಚಟುವಟಿಕೆ ನಡೆಸುತ್ತಿವೆ ಎಂದು ತಿಳಿದು ಬಂದಿರುತ್ತದೆ.