'ಟೀಮ್ ಪಾಂಚಜನ್ಯ ದೇಲಂಪಾಡಿ ನೇತೃತ್ವದ ಚತುರ್ಥ ವರ್ಷದ ಕೆಸರ್‌ಡ್ ಒಂಜಿದಿನ 2025' ಗೆ ಕ್ಷಣಗಣನೆ ಆರಂಭ – ಜು.6ಕ್ಕೆ ಸಜ್ಜಾಗಿದೆ ಹಿಂದು ಒಗ್ಗಟ್ಟು; ಸಮಸ್ತ ಹಿಂದೂ ಬಾಂಧವರಿಗೆ ಆದರದ ಸ್ವಾಗತ!

  • 20 Jun 2025 12:01:11 PM


 

 

ದೇಲಂಪಾಡಿ: ಟೀಮ್ ಪಾಂಚಜನ್ಯ ದೇಲಂಪಾಡಿಯ ಆಶ್ರಯದಲ್ಲಿ ಹಿಂದು ಭಾಂಧವರ ಚತುರ್ಥ ವರ್ಷದ ಕೆಸರ್‌ಡ್ ಒಂಜಿದಿನ 2025 ಕಾರ್ಯಕ್ರಮ ಜುಲೈ 6, 2025ರ ಭಾನುವಾರದಂದು ವಿಜೃಂಭಣೆಯಿಂದ ನಡೆಯಲಿದೆ.

 

ದೇಲಂಪಾಡಿಯ ವಾಲ್ತಾಚೆ ಗದ್ದೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಿಂದು ಬಾಂಧವರ ಆಟೋಟ ಸ್ಪರ್ಧೆಗಳು ಸಂಭ್ರಮದಿಂದ ಜರುಗಲಿವೆ.

 

 

ಹಿಂದು ಸಮಾಜದ ಏಕತೆ ಮತ್ತು ಸಹಭಾಗಿತ್ವದ ಭಾವನೆ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ವಿಶೇಷ ಮಹತ್ವ ಹೊಂದಿದ್ದು, ಎಲ್ಲಾ ವಯೋಮಾನದ ಹಿಂದು ಭಾಂಧವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಟೋಟ ಸ್ಪರ್ಧೆಗಳು ಜನತೆಯ ಗಮನ ಸೆಳೆಯಲಿವೆ.

 

ಸಮಸ್ತ ಹಿಂದು ಭಾಂಧವರಿಗೆ ಟೀಮ್ ಪಾಂಚಜನ್ಯ ದೇಲಂಪಾಡಿ ಹೃದಯಪೂರ್ವಕ ಸ್ವಾಗತವನ್ನು ಕೋರಿದೆ.