ಟಿ20 ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್ ಹೊಸ ಮೈಲಿಗಲ್ಲು: 13 ಸಾವಿರ ರನ್‌ಗಳ ಸಾಧನೆ

  • 20 Jul 2025 03:51:22 PM


ಇಂಗ್ಲೆಂಡ್: ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಹೊಸ ಮೈಲಿಗಲ್ಲು ತಲುಪಿದ್ದಾರೆ. 

 

ಟಿ20 ಬ್ಲಾಸ್ಟ್ ಟೂರ್ನಿಯ ಕೆಲವೊಂದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬಟ್ಲರ್, ಯಾರ್ಕ್‌ಶೈರ್ ವಿರುದ್ಧ 77 ರನ್ ಬಾರಿಸಿ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಪೂರೈಸಿದ ಇಂಗ್ಲೆಂಡಿನ ಎರಡನೇ ಹಾಗೂ ವಿಶ್ವದ ಏಳನೇ ಆಟಗಾರರಾಗಿದ್ದಾರೆ. 

 

ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಈ ಮೊದಲು ಈ ಸಾಧನೆ ಮೆರೆದಿದ್ದಾರೆ.

 

ಬಟ್ಲರ್ ಈಗಾಗಲೇ 432 ಟಿ20 ಇನಿಂಗ್ಸ್‌ಗಳಲ್ಲಿ 8946 ಎಸೆತಗಳನ್ನು ಎದುರಿಸಿ, 8 ಶತಕ ಹಾಗೂ 93 ಅರ್ಧಶತಕಗಳ ಮೂಲಕ ಒಟ್ಟು 13055 ರನ್‌ಗಳನ್ನು ಸಾಧಿಸಿದ್ದಾರೆ.

 

ಈ ದಾಖಲೆ ಮೂಲಕ ಅವರು ಟಿ20 ಕ್ರಿಕೆಟ್‌ನಲ್ಲೇ ಅತ್ಯಧಿಕ ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ ಸೇರಿದ್ದಾರೆ.