ದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಖಲೆಯೊಂದನ್ನು ಮುರಿಯುವ ಮೂಲಕ ಸಿಎಸ್ಕೆ ಹೊಸ ದಾಖಲೆ ಸೃಷ್ಟಿಸಿದೆ.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 230 ಗಳಿಸಿ ಐಪಿಎಲ್ನಲ್ಲಿ ಅತ್ಯಧಿಕ ಬಾರಿ 200ಕ್ಕೂ ಅಧಿಕ ರನ್ ಗಳಿಸಿದ ತಂಡ ಎಂದೆನಿಸಿಕೊಂಡಿದೆ.
ಇದಕ್ಕೂ ಮೊದಲು ಈ ದಾಖಲೆ ಆರ್ಸಿಬಿಯ ಹೆಸರಿನಲ್ಲಿತ್ತು. 268 ಪಂದ್ಯಗಳಲ್ಲಿ 33 ಬಾರಿ 200 ಪ್ಲಸ್ ಸ್ಕೋರ್ ಮಾಡಿದ ಆರ್ಸಿಬಿ, ಈವರೆಗೆ ಅತ್ಯಧಿಕ ಹೈ ಸ್ಕೋರ್ ಮಾಡಿದ ತಂಡವೆಂದುಹೆಸರಾಗಿತ್ತು. ಆದರೆ ಇದೀಗ ಸಿಎಸ್ಕೆ ಅದನ್ನು ಮೀರಿ ಐಪಿಎಲ್ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ.