ಬೆಳ್ತಂಗಡಿ: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವಾ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭವಾದ ವೀರಕೇಸರಿ ಬೆಳ್ತಂಗಡಿ ತಂಡ, ಕಳೆದ 9 ವರ್ಷ 2 ತಿಂಗಳಲ್ಲಿ 187 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ನೊಂದವರಿಗೆ ನೆರವಾಗುವುದು, ಯುವ ಮನಸ್ಸುಗಳಿಗೆ ಪ್ರೇರಣೆಯಾಗುವುದು ಮತ್ತು ನವ ಸಮಾಜ ನಿರ್ಮಾಣದ ಕನಸು ತುಂಬಿಕೊಳ್ಳುವುದು ಈ ತಂಡದ ಗುರಿಯಾಗಿದ್ದು, 10ನೇ ವರ್ಷದ ಪಯಣದಲ್ಲಿ ಸೇವಾತ್ಮಕ ದಾರಿ ಸುಸೂತ್ರವಾಗಿ ಮುಂದುವರೆದಿದೆ.
ಇತ್ತೀಚೆಗಿನ 69ನೇ ಮಾಸಿಕ ಸೇವಾಯೋಜನೆಯ ಅಡಿಯಲ್ಲಿ ಮೂಡಬಿದ್ರೆಯ ಶಿರ್ತಾಡಿ ಕಬ್ಯಾರು ನಿವಾಸಿ ಪ್ರಮೀಳಾ ಮತ್ತು ಅವರ ಪತಿಗೆ ಆರೋಗ್ಯ ಸಮಸ್ಯೆಗಳಿಂದಾಗಿ ಸಂಕಷ್ಟದಲ್ಲಿದ್ದು ಅವರಿಗೆ ₹15,000 ಸಹಾಯಧನ ನೀಡಲಾಗಿದೆ.
ಇದಲ್ಲದೇ ವಾಮಂಜೂರಿನ ಬೋಡಂತಿಲ ನಿವಾಸಿ ಮಲ್ಲಿಕಾ ಅವರ ಪುತ್ರಿ ಅಶ್ವಿತಾ ಅವರ ಉತ್ತಮ ವಿದ್ಯಾಭ್ಯಾಸಕ್ಕಾಗಿ ₹15,000 ಹಾಗೂ ಬಂಟ್ವಾಳ ತಾಲೂಕಿನ ಕುಂಡಡ್ಕ ನಿವಾಸಿ ಜೀವನ್ಯ ಅವರ ವಿದ್ಯಾಭ್ಯಾಸ ನೆರವಿಗಾಗಿ ₹10,000 ರೂ. ಸಹಾಯ ಧನವನ್ನು ನೀಡಲಾಗಿದೆ.
ಒಟ್ಟಾರೆ ಈ ಮಾಸಿಕ ಸೇವಾಯೋಜನೆಗಾಗಿ ₹40,000 ರೂಪಾಯಿಗಳನ್ನು ವಿನಿಯೋಗಿಸಲಾಯಿತು.
ತಂಡದ ಸಮರ್ಪಿತ ಸೇವಾ ಚಟುವಟಿಕೆಗಳ ನಿರಂತರತೆಯ ಸಾಕ್ಷಿಯಾಗಿ ಪರಿಣಮಿಸಿದೆ.
ತಂಡದ ಈ ಯಶಸ್ಸಿಗೆ ಕಾರಣರಾದ ಎಲ್ಲಾ ಸದಸ್ಯರು, ಸಹಕಾರಿಗಳು ಹಾಗೂ ಹಿತೈಷಿಗಳಿಗೆ ವೀರಕೇಸರಿ ಬೆಳ್ತಂಗಡಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.