ಕೇರಳ ಅಸ್ಮಿತೆಯೆಡೆಗೆ – ಧರ್ಮ ಸಂದೇಶ ಯಾತ್ರೆ ಕಾರ್ಯಕ್ರಮಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಭಾರಿ ಸಿದ್ಧತೆ; ಜುಲೈ 8 ಮಂಗಳವಾರದಂದು ವಿದ್ಯಾನಗರ ಚಿನ್ಮಯಿ ಸಿಬಿಸಿ ಹಾಲ್ ನಲ್ಲಿ ಸ್ವಾಗತ ಸಮಿತಿ ರೂಪೀಕರಣ

  • 06 Jul 2025 02:44:02 PM


ಕಾಸರಗೋಡು: ಸನಾತನ ಧರ್ಮದ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಜಾಗೃತಿ ಮೂಡಿಸುವ ಉದ್ದೇಶದಿಂದ “ಧರ್ಮ ಸಂದೇಶ ಯಾತ್ರೆ”ಯ ಆರಂಭಕ್ಕೆ ಸಿದ್ಧತೆ ಆರಂಭಗೊಂಡಿದೆ.

 

 ಕೇರಳದ ವಿವಿಧ ಆಶ್ರಮಗಳ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆಯು, 2025 ಅಕ್ಟೋಬರ್ 7ರಿಂದ 21ರವರೆಗೆ ಕಾಸರಗೋಡಿನಿಂದ ತಿರುವನಂತಪುರದವರೆಗೆ ನಡೆಯಲಿದೆ.

 

ಈ ಮಹತ್ತ್ವಾಕಾಂಕ್ಷಿ ಯಾತ್ರೆಯ ಯಶಸ್ಸಿಗಾಗಿ ಜಿಲ್ಲಾವಾರು ಸ್ವಾಗತ ಸಮಿತಿಗಳ ರಚನೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, 2025 ಜುಲೈ 8, ಮಂಗಳವಾರದಂದು ಬೆಳಿಗ್ಗೆ 9.30ಕ್ಕೆ, ಕಾಸರಗೋಡು ವಿದ್ಯಾನಗರದಲ್ಲಿರುವ ಚಿನ್ಮಯ ವಿದ್ಯಾಲಯದ ಸಿಬಿಸಿ ಹಾಲ್‌ನಲ್ಲಿ ಕಾಸರಗೋಡು ಜಿಲ್ಲಾ ಸ್ವಾಗತ ಸಮಿತಿ ರೂಪೀಕರಣ ಸಭೆ ನಡೆಯಲಿದೆ.

 

ಸಭೆಗೆ ಸ್ವಾಮಿ ಚಿದಾನಂದ ಪುರಿ ಅವರ ನೇತೃತ್ವದ ಮಾರ್ಗದರ್ಶನ ಲಭ್ಯವಿದ್ದು, ವಿವಿಧ ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಧರ್ಮ ಪ್ರೇಮಿಗಳ ಭಾಗವಹಿಸಲು ಆಹ್ವಾನಿಸಲಾಗಿದೆ. 

 

ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಮುಖ್ಯ ರಕ್ಷಾಧಿಕಾರಿಯಾಗಿ, ಖ್ಯಾತ ಲೇಖಕ ಶ್ರೀ ಸಿ. ರಾಧಾಕೃಷ್ಣನ್ ಅಧ್ಯಕ್ಷರಾಗಿ ಹಾಗೂ ಕೇರಳದ ಅನೇಕ ಪ್ರಮುಖ ಸ್ವಾಮೀಜಿಗಳು ಈ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ.

 

ಸನಾತನ ಧರ್ಮದ ಪ್ರಚಾರ-ಪ್ರಸಾರ ಹಾಗೂ ಸಮಾಜದ ಪುನರ್ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ಸಹಕರಿಸಲು ಎಲ್ಲ ಹಿಂದೂ ಸಂಘಟನೆಗಳು ಮತ್ತು ಪ್ರತಿನಿಧಿಗಳನ್ನು ಮತ್ತು ಸಾರ್ವಜನಿಕರನ್ನು ಮನಃಪೂರ್ವಕವಾಗಿ ಆಹ್ವಾನಿಸಲಾಗಿದೆ.